08199-243772

ರಂಗಪ್ರಯೋಗ ಶಾಲೆ

ಈ ರಂಗಪ್ರಯೋಗ ಶಾಲೆ 2008ರಲ್ಲಿ ಪ್ರಾರಂಭವಾಗಿದೆ. ಹತ್ತು ವರ್ಷ ಪೂರೈಸಿದೆ, ರಂಗಶಿಕ್ಷಣದಲ್ಲಿ ಇನ್ನೂ ಅಂಬೆಗಾಲಿಡುತ್ತಿರುವ ಶಾಲೆ ಇದಾದರೂ, 30 ವರ್ಷಗಳಿಂದ ರಂಗಭೂಮಿಯಲ್ಲಿ ಕೆಲಸ ಮಾಡುತ್ತಾ ಬಂದಿರುವ ಕಲಾಸಂಘ ಮತ್ತು ಹದಿನೈದು ವರ್ಷಗಳ ಕಾಲ 'ಶಿವ ಸಂಚಾರ' ಎನ್ನುವ ಸಂಚಾರಿ ರಂಗತಂಡದ ಕೆಲಸ ಈ ಶಾಲೆಯ ಪ್ರಾರಂಭದ ಬೆನ್ನಿಗಿದೆ. ಕನ್ನಡದ ವಾತಾವರಣದಲ್ಲಿ, ಗುರುಕುಲ ಮಾದರಿಯಲ್ಲಿ ರಾಷ್ಟ್ರೀಯ ನಾಟಕ ಶಾಲೆಯ ಮತ್ತು ದೇಶದ ವಿವಿಧ ರಂಗಶಾಲೆಗಳ ಪಠ್ಯಕ್ರಮವನ್ನು ಗಮನದಲ್ಲಿರಿಸಿಕೊಂಡು ರೂಪಿಸಿರುವ ಕನ್ನಡದ ರಂಗಶಾಲೆ. ಗ್ರಾಮೀಣ ಭಾಗದ ಉತ್ಸಾಹೀ ಯುವಕ-ಯುವತಿಯರಿಗೆ ಶಾಸ್ತ್ರೀಯವಾಗಿ ಮತ್ತು ಪ್ರಾಯೋಗಿಕವಾಗಿ ರಂಗಭೂಮಿಯನ್ನು ಕಲಿಸಬೇಕೆನ್ನುವ ಉದ್ದೇಶದಿಂದ ಮತ್ತು ಇವತ್ತಿನ ಇಂಡಿಯಾದ ಸಂದರ್ಭವನ್ನು ಸಾಂಸ್ಕೃತಿಕವಾಗಿ ಎದುರಿಸುವ ಸಂಪರ್ಕ ಸೇತುವಾಗಿ ನಮ್ಮ ತರುಣ ತರುಣಿಯರು ರಂಗಭಾಷೆಯನ್ನು ಕಲಿತು ಕಾರ್ಯ ನಿರ್ವಹಿಸಬೇನ್ನುವ ಅಭಿಲಾಷೆಯಿಂದ ಈ ಶಾಲೆ ಪ್ರಾರಂಭವಾಗಿದೆ. ಅಪ್ಪಟ ಗ್ರಾಮೀಣ ಭಾಗದ ಕಸುವು, ಚೆಲುವು ರಂಗಭಾಷೆಗೆ ಮತ್ತು ರಂಗಕಲೆಗೆ ಒದಗಿಬರಲಿ ಎಂಬ ಉದ್ದೇಶವೂ ಈ ರಂಗಶಾಲೆಯ ಜೊತೆಗಿದೆ.

ಈ ನಾಲ್ಕು ವರ್ಷಗಳಲ್ಲಿ 65 ಜನ ವಿದ್ಯಾರ್ಥಿಗಳು ಈ ರಂಗಶಾಲೆಯಲ್ಲಿ ವ್ಯಾಸಂಗ ಮಾಡಿದ್ದಾರೆ. ಈ 65 ಜನರು ಕರ್ನಾಟಕದ ಎಲ್ಲಾ ಜಿಲ್ಲೆಗಳಿಂದ ಬಂದವರು ಎಂಬುದು ಗಮನಾರ್ಹ ಸಂಗತಿ. ಇವರಲ್ಲಿ ಬಹುಪಾಲು ವಿದ್ಯಾಥರ ವಿದ್ಯಾರ್ಥಿಗಳು ರಂಗ ಶಿಕ್ಷಣವನ್ನು ಮುಗಿಸಿ 'ಶಿವ ಸಂಚಾರ' ರೆಪರ್ಟರಿಯಲ್ಲಿ ನಟರಾಗಿ-ತಂತ್ರಜ್ಞರಾಗಿ ಕೆಲಸ ಮಾಡಿದ್ದಾರೆ. ಶೇಕಡ 90ರಷ್ಟು ಜನ ರಂಗಭೂಮಿಯನ್ನೇ ಪೂರ್ಣಾವಧಿ ವೃತ್ತಿಯಾಗಿ ಸ್ವಿಕರಿಸಿರುವುದು ಗಮನಾರ್ಹ. ಕೆಲವು ಜನ ಸಿನೇಮಾ ಹಾಗೂ ಕಿರುತೆರೆಯಲ್ಲಿ ಕೆಲಸ ಮಾಡುತ್ತಿದ್ದಾರೆ.
Read More...