08199-243772

ಶಿವಸಂಚಾರದ ನಾಟಕಗಳನ್ನು ಆಹ್ವಾನಿಸುವವರಿಗೆ ಸೂಚನೆಗಳು:


 8ನವೆಂಬರ್ ಮೊದಲ ವಾರದಲ್ಲಿ ಸಾಣೇಹಳ್ಳಿಯಲ್ಲಿ ಪ್ರದರ್ಶನ. ನಂತರ ಸಂಚಾರ ಆರಂಭ.
 30 ಅಡಿ ಅಗಲ, 30 ಅಡಿ ಉದ್ದ, 3 ಅಡಿ ಎತ್ತರದ ವೇದಿಕೆ, ಸುತ್ತಲೂ ರಕ್ಷಣೆ, ವಿದ್ಯತ್ ಸೌಲಭ್ಯ ಇರುವ ಯಾವುದೇ ಊರಲ್ಲಿ ನಾಟಕಗಳ ಪ್ರದರ್ಶನ ನೀಡಲಾಗುವುದು.
  ನಾಟಕಗಳಿಗೆ ಬೇಕಾಗುವ ರಂಗಪರಿಕರ, ಧ್ವನಿವರ್ಧಕ, ಬೆಳಕಿನ ವ್ಯವಸ್ಥೆ ನಮ್ಮದು. ವಿದ್ಯುತ್ ಕೈಕೊಡುವುದರಿಂದ 10 ಕೆವಿ ಜನರೇಟರ್ ವ್ಯವಸ್ಥೆ ನೀವು ಮಾಡಿಕೊಳ್ಳಬೇಕು.
  20 ಕಲಾವಿದರಿಗೆ ಊಟ, ತಿಂಡಿ, ವಸತಿಯೊಂದಿಗೆ 20,000 ರೂಪಾಯಿ ಕೊಡಬೇಕು.
  ನೀವು ಬಯಸಿದಂದೇ ನಾಟಕಗಳು ಬೇಕಾದಲ್ಲಿ ನಿಗದಿಪಡಿಸುವ ಹೆಚ್ಚುವರಿ ಹಣ ನೀಡಬೇಕು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ
  ಹಾಗೂ ಹೊರ ರಾಜ್ಯಗಳವರು ನಾವು ನಿಗದಿಪಡಿಸುವ ಹೆಚ್ಚುವರಿ ಹಣ ನೀಡಬೇಕು. ಪ್ರತಿದಿನ ಒಂದು ನಾಟಕವನ್ನು ಮಾತ್ರ ಪ್ರದರ್ಶಿಸಲಾಗುವುದು.
 ನಾಟಕದ ದಿನಾಂಕ ನಿಗದಿಪಡಿಸಿಕೊಳ್ಳಲು ಮುಂಗಡವಾಗಿ 5000/- ರೂಪಾಯಿ ಕಳಿಸಬೇಕು. ವರ್ಷದಲ್ಲಿ 40-50 ಊರುಗಳಲ್ಲಿ ಮಾತ್ರ ಪ್ರದರ್ಶನ ಕೊಡಲು ಸಾಧ್ಯ. ಅರ್ಜಿಯ ಆದ್ಯತೆಯ ಮೇರೆಗೆ ಅವಕಾಶ ಕಲ್ಪಿಸಲಾಗುವುದು.
  ನಿಮ್ಮಲ್ಲಿಗೆ ತಂಡ ಬಂದನಂತರ ವಿದ್ಯುತ್, ಮಳೆ ಮತ್ತಿತರ ಕಾರಣಗಳಿಂದ ನಾಟಕ ನಿಂತರೂ ನಿಗದಿತ ಹಣವನ್ನು ಕೊಡಲೇಬೇಕು.
  ಹೆಚ್ಚಿನ ಮಾಹಿತಿಗಾಗಿ ಸಂಘದ ಕಾರ್ಯದರ್ಶಿಯವರನ್ನು ಸಂಪರ್ಕಿಸಬಹುದು.