08199-243772

ಯೋಜನೆಗಳು:


  ಒಳಾಂಗಣ ರಂಗಮಂದಿರ: ಮಳೆಗಾಲದಲ್ಲಿ ಬಯಲಿನಲ್ಲಿ ನಾಟಕ ಮಾಡಲು ಸಾಧ್ಯವಾಗುವುದಿಲ್ಲ. ಈ ಹಿನ್ನೆಲೆಯಲ್ಲಿ ಕನಿಷ್ಠ 1000 ಜನರು ಕೂರುವಂತಹ ಸುಸಜ್ಜಿತ ಒಳಾಂಗಣ ರಂಗಮಂದಿರ ನಿರ್ಮಾಣ ಮಾಡುವುದು..
 ಪ್ರಾರ್ಥನಾ ಮಂದಿರ: ಒಂದು ಸಾವಿರ ಜನರು ಕುಳಿತು ನಿತ್ಯ ಪ್ರಾರ್ಥನೆ ಮಾಡಲು ಅನುಕೂಲವಾಗುವಂತಹ ಅಪರೂಪದ ಪ್ರಾರ್ಥನಾ ಮಂದಿರದ ನಿರ್ಮಾಣ.
 ಗ್ರಾಮೀಣ ರಂಗಭೂಮಿಗೆ ಸಹಾಯ: ಹಳ್ಳಿಗಳಲ್ಲಿ ಹಿಂದಿನಿಂದಲೂ ನಾಟಕಗಳನ್ನು ಆಡುವ ಪದ್ಧತಿ ಇತ್ತು. ಇತ್ತೀಚೆಗೆ ಅದು ನಶಿಸುತ್ತಲಿದೆ. ಈಗ ಮತ್ತೆ ಪುನಶ್ಚೇತನಗೊಳಿಸುವ ಕಾರ್ಯ ಮಾಡಬೇಕಾಗಿದೆ. ಅದಕ್ಕಾಗಿ ಅವರಿಗೆ ನಿರ್ದೇಶಕರನ್ನು ಕಳಿಸುವುದು, ನಾಟಕದ ದಿನ ನೆರಳು ಬೆಳಕಿನ ವ್ಯವಸ್ಥೆ ಮಾಡುವುದು, ಧ್ವನಿವರ್ಧಕ ಒದಗಿಸುವುದು ಇತ್ಯಾದ ಕೆಲಸ ಆಗಬೇಕಾಗಿದೆ.
  ಅತಿಥಿ ಗೃಹ : ಸಾಣೇಹಳ್ಳಿಗೆ ಭೇಟಿ ಕೊಡುವ ಅತಿಥಿಗಳ ಸಂಖ್ಯೆ ಬೆಳೆಯುತ್ತಲಿದ್ದು ಅವರ ವಸತಿಯ ಸೌಲಭ್ಯಕ್ಕಾಗಿ ವಿಶೇಷ ರೀತಿಯ ಅತಿಥಿಗೃಹದ ನಿರ್ಮಾಣ.
  ಕಲಾವಿದರ ದತ್ತು ತೆಗೆದುಕೊಳ್ಳುವಿಕೆ: ಪ್ರತಿವರ್ಷ ಶಿವಸಂಚಾರಕ್ಕೆ ಬರುವ ಕಲಾವಿದರಿಗೆ ನಾವು ಕೊಡುತ್ತಿರುವ ಮಾಸಿಕ ಗೌರವ ಧನ ತುಂಬಾ ಕಡಿಮೆ. ಹಾಗಾಗಿ ಒಬ್ಬೊಬ್ಬ ಕಲಾವಿದರನ್ನು ಒಂದು ವರ್ಷದ ವರೆಗೆ ದತ್ತು ತೆಗೆದುಕೊಂಡು ಅವರಿಗೆ ಮಾಸಿಕ ಕನಿಷ್ಠ 6000 ಹಣ ಕೊಡುವ ವ್ಯವಸ್ಥೆ ಮಾಡುವ ಆಶಯ.
 ಹೊಸ ವಾಹನ: ಶಿವಸಂಚಾರದ ಕಲಾವಿದರ ಪ್ರಯಾಣಕ್ಕಾಗಿ ಸುಸಜ್ಜಿತವಾದ ಇನ್ನೊಂದು ಬಸ್‌ನ ತರುವುದು.
  ರಂಗಶಿಬಿರಗಳು: ವರ್ಷದಲ್ಲಿ ನಾಲ್ಕಾರು ಕಡೆ ಮಕ್ಕಳ ಹಾಗೂ ಗ್ರಾಮೀಣರ ರಂಗತರಬೇತಿ ಶಿಬಿರ ನಡೆಸುವುದು.



ದಾನಿಗಳಲ್ಲಿ ಮನವಿ:


ಮೇಲ್ಕಂಡ ಕೆಲಸ ಕಾರ್ಯಗಳ ಹಿನ್ನೆಲೆಯಲ್ಲಿ ಕೋಟಿಗಟ್ಟಲೆ ಹಣ ಬೇಕಾಗುವುದು. 'ಕೊಟ್ಟದ್ದು ತನಗೆ, ಬಚ್ಚಿಟ್ಟದ್ದು ಪರರಿಗೆ. ಕೊಟ್ಟು ಕೆಟ್ಟಿತೆನಬೇಡ. ಮುಂದೆ ಕಟ್ಟಿಹುದು ಬುತ್ತಿ' ಎನ್ನುವ ಸರ್ವಜ್ಞನ ಆಶಯಕ್ಕನುಗುಣವಾಗಿ ಇಂಥ ಸತ್ಕಾರ್ಯಗಳಿಗೆ ಹಣವುಳ್ಳ ಧನಿಕರು, ಸಾರ್ವಜನಿಕರು ಹೆಚ್ಚಿನ ಧನಸಹಾಯ ಮಾಡಬೇಕಾಗಿ ವಿನಂತಿಸಿಕೊಳ್ಳುತ್ತೇವೆ. ಚೆಕ್, ಡಿಡಿ ಅಥವಾ ನಗದಾಗಿ ಕೊಡಬಹುದು.